Monday 18 March 2019

Educational Tour




EDUCATIONAL TOUR TO NEERCHAL AGRICULTURE FARM,BELA 

CHURCH,KUMARA MANGALA GOSHALE,ANANTHAPURA 

TEMPLE, KINFRA INDUSTRAIL AREA, CIRCUS, BEKAL FORT, 























PALLIKERE BEACH ETC.....

Saturday 16 February 2019

kalikothsava




















ಉದಯಗಿರಿಶಾಲೆಯಲ್ಲಿಕಲಿಕೋತ್ಸವ
 
ಶ್ರೀ ಶ೦ಕರನಾರಾಯಣ ಪ೦ಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ಕಲಿಕೋತ್ಸವನ್ನು  

ಆಚರಿಸಲಾಯಿತು. ಬೆಳಗ್ಗೆ ಕಲಿಕೋತ್ಸವ 2019ನ್ನು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ 

ಕೈಲಾಸಮೂರ್ತಿಯವರ ಅಧ್ಯಕ್ಷತೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರಾದ ಶ್ರೀ ಕೆ.ಎನ್ ಕೃಷ್ಣ 

ಭಟ್ ಉದ್ಘಾಟಿಸಿದರು. ಶಾಲೆಗಳ ಭೌತಿಕ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು ಜನಪ್ರತಿನಿಧಿಗಳ 

ಕರ್ತವ್ಯವಾದರೆ ಮಕ್ಕಳ ಕಲಿಕಾ ಗುಣಮಟ್ಟವನ್ನು ಉತ್ತಮ ಪಡಿಸುವುದು ಅಧ್ಯಾಪಕರ ಮತ್ತು ಹೆತ್ತವರ 

ಕರ್ತವ್ಯವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ. 

ಅಧ್ಯಕ್ಷಯಾದ ಶ್ರೀಮತಿ ಕುಸುಮ ಬಾಂಜತ್ತಡ್ಕ,ಶಾಲಾ ಎಂ.ಪಿ.ಟಿ.ಎ ಅಧ್ಯಕ್ಷ ಶ್ರೀಮತಿ ಬೇಬಿ ಶಾಲಿನಿ,  

ಶಾಲಾ ಹಿತೈಷಿಗಳಾದ ಶ್ರೀ ರಾಮ ಮಾಸ್ಟರ್ ಇಕ್ಕೇರಿ, ಶ್ರೀ ರವಿಕಾಂತ ಕೇಸರಿ ಕಡಾರ್, ಶ್ರೀ  

ಪುರುಷೋತ್ತಮ ಭಟ್ ಮಿಂಚಿನಡ್ಕ, ಶ್ರೀಮತಿ ರಶ್ಮಿ ಎ.ಎಸ್ ಬಾಂಜತ್ತಡ್ಕ, ಶ್ರೀಮತಿ ಗೀತಮಾಲಿನಿ  

ಬಾಂಜತ್ತಡ್ಕ ಮೊದಲಾದವರು ಭಾಗವಹಿಸಿದರು. ಹೆತ್ತವರು, ಊರವರು, ಹಳೆ ವಿದ್ಯಾರ್ಥಿಗಳು  

ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅ೦ಬಿಕಾ 

ಸರಸ್ವತಿ ಸ್ವಾಗತಿಸಿ ಕೊನೆಯಲ್ಲಿ ಎಸ್.ಎಸ್.ಜಿ ಅಧ್ಯಕ್ಷರಾದ ಶ್ರೀ ಕೃಷ್ಣ ಪ್ರಸಾದ ಭಾರತಬೈಲ್  

ಧನ್ಯವಾದವಿತ್ತರು. ಅಧ್ಯಾಪಕರಾದ ಶ್ರೀ ರಾಜೇಶ್. ಯಸ್ ಕಾರ್ಯಕ್ರಮ ನಿರೂಪಿಸಿದರು.
 
ನಂತರ ಕಲಿಕೋತ್ಸವದ ಭಾಗವಾಗಿ ಸಾಹಿತಿ ವಿರಾಜ್ ಅಡೂರ್ ಅವರೊಂದಿಗೆ ಮಕ್ಕಳು ಸಂದರ್ಶನ ನಡೆಸಿ 

ವರದಿ ತಯಾರಿಸಿದರು. ಕಥೆ, ಕವನ, ಗಾದೆ, ಒಗಟು, ನಾಟಕ,ವಿವರಣೆ, ಗಣಿತಕ್ರಿಯೆ, ಪ್ರಯೋಗ, ಭೂಪಟ 

ಓದು, ಮೊದಲಾದ ಚಟುವಟಿಕೆಗಳನ್ನು ಪ್ರದರ್ಶಿಸಿ ಹೆತ್ತವರ ಮತ್ತು ಊರವರ ಪ್ರಶಂಸೆಗೆ ಪಾತ್ರರಾದರು.  

ಅಧ್ಯಾಪಿಕೆಯರಾದ ಶ್ರೀಮತಿ ವಿಭಶ್ರೀ ಹಾಗೂ ಶ್ರೀಮತಿ ಪ್ರಿಯ ಚಟುವಟಿಕೆಗಳಿಗೆ ನೇತೃತ್ವ ವಹಿಸಿದರು.

Tuesday 29 January 2019

Pattanothsava



ಎಸ್.ಎಸ್.ಪಿ..ಎಲ್.ಪಿ ಶಾಲೆ ಉದಯಗಿರಿ
ಅಂಚೆ: ಪೆರಡಾಲ 671551 ಮಿಂಚಂಚೆ: sspalpsudayagiri@gmail.com
  MoB: 9847830819, 9495894630
ಕಲಿಕೋತ್ಸವ 2019
....................................................................................................................
ಪ್ರಿಯರೇ,
ಶೈಕ್ಷಣಿಕ ವರ್ಷದ ಕೊನೆಯ ಹಂತದಲ್ಲಿ ನಾವಿದ್ದೇವೆ.ಪ್ರತಿಯೊಂದು ಮಗುವಿಗೂ ಉಚಿತ ಕಡ್ಡಾಯ ಮತ್ತು ಗುಣಮಟ್ಟದ ಶಿಕ್ಷಣ ಲಭಿಸಲು ಹತ್ತುಹಲವು ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಂಡಿದ್ದೇವೆ.ಇವುಗಳ ಪ್ರತಿಫಲನವು ಮಕ್ಕಳಲ್ಲಿ ಕಾಣುತ್ತಾ ಇದೆ. ಮಕ್ಕಳ ಕಲಿಕಾ ಸಾಮರ್ಥ್ಯದ ಪ್ರದರ್ಶನವಾದ ಕಲಿಕೋತ್ಸವವನ್ನು ಇದೇ ಬರುವ ತಾರೀಕು 09.02.2019ನೇ ಶನಿವಾರ ನಡೆಸಲು ತೀರ್ಮಾನಿಸಲಾಗಿದೆ.
ಕಾರ್ಯಕ್ರಮ
ಪ್ರಾರ್ಥನೆ          :ಶಾಲಾವಿದ್ಯಾರ್ಥಿಗಳು
ಸ್ವಾಗತ          :ಶ್ರೀಮತಿ .ಅಂಬಿಕಾಸರಸ್ವತಿ    [ಮುಖ್ಯೋಪಾಧ್ಯಾಯರು]
ಅಧ್ಯಕ್ಷತೆ        :ಶ್ರೀ ಶ್ಯಾಮ್ ಪ್ರಸಾದ್ ಮಾನ್ಯ     [ಅಧ್ಯಕ್ಷರು,ಶೈಕ್ಷಣಿಕ ಸ್ಥಾಯಿ ಸಮಿತಿ ಬದಿಯಡ್ಕ ಗ್ರಾಮ ಪಂಚಾಯತು]
ಪ್ರಾಸ್ತಾವಿಕ ನುಡಿ: ಶ್ರೀ ರಾಜೇಶ್ ಯಸ್            [ಅಧ್ಯಾಪಕರು]
ಉದ್ಘಾಟನೆ      :ಶ್ರೀ ಕೆ ಎನ್ ಕೃಷ್ಣಭಟ್             [ಅಧ್ಯಕ್ಷರು,ಶೈಕ್ಷಣಿಕ ಸ್ಥಾಯಿ ಸಮಿತಿ ಬದಿಯಡ್ಕ ಗ್ರಾಮ ಪಂಚಾಯತು]
ಉಪಸ್ಥಿತಿ        :ಶ್ರೀ ಕೈಲಾಸಮೂರ್ತಿ               [ವಿದ್ಯಾಧಿಕಾರಿಗಳು, ಕುಂಬಳೆ ಉಪಜಿಲ್ಲೆ]
                  :ಶ್ರೀಮತಿ ಪ್ರಸನ್ನ                     [ಸದಸ್ಯರಬದಿಯಡ್ಕ ಗ್ರಾಮ ಪಂಚಾಯತು]
                  :ಶ್ರೀ ಕುಞಿಕೃಷ್ಣನ್                    [ಸಂಯೋಜನಾಧಿಕಾರಿ,ಸಮಗ್ರ ಶಿಕ್ಷಣ,ಕುಂಬಳೆ]
                 :ಶ್ರೀಮತಿ ಕುಸುಮ                    [ಅಧ್ಯಕ್ಷರು, PTAಉದಯಗಿರಿ ಶಾಲೆ]
                 :ಶ್ರೀಮತಿ ಬೇಬಿ ಶ್ಯಾಲಿನಿ              [ಅಧ್ಯಕ್ಷರು, MPTAಉದಯಗಿರಿ ಶಾಲೆ]
                 :ಶ್ರೀ ಕೃಷ್ಣಪ್ರಸಾದ್.ಬಿ                 [ ಅಧ್ಯಕ್ಷರು, SSGಉದಯಗಿರಿ ಶಾಲೆ]
ಧನ್ಯವಾದ       :ಶ್ರೀಮತಿ ವಿಭಶ್ರೀ                    [ ಕನ್ವೀನರು, SRGಉದಯಗಿರಿ ಶಾಲೆ]
ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು
ಸಂದರ್ಶನ ಹಾಗೂ ರಚನಾ ತರಬೇತಿ
ಅತಿಥಿ :ಶ್ರೀ ವಿರಾಜ್ ಅಡೂರು    [ಸಾಹಿತಿ,ವ್ಯಂಗ್ಯ ಚಿತ್ರ ಕಲಾವಿದರು]
 
ಉಪಸ್ಥಿತಿ :ಶ್ರೀ ರವಿಕಾಂತ ಕೇಸರಿ ಕಡಾರ್[ಜಾನಪದ ಕಲಾವಿದರು]
 
ರ್ವರಿಗೂ ಸ್ವಾಗತ ಬಯಸುವ                                          ಅಧ್ಯಕ್ಷರು ಹಾಗೂ ಸದಸ್ಯರ
 
ಶಾಲಾ ವಿದ್ಯಾರ್ಥಿವಿದ್ಯಾರ್ಥಿನಿಯರು                                PTA,MPTA,SSG

Sunday 23 December 2018

X MAS ACTIVITIES

 X MAS CELEBRATION







          GREETING CARDS










                                 X MAS TREE







 X MAS CAKE




                       X MAS GIFT








 SANTA NICOLAS





                        X MAS MESSAGE

   




                       X MAS WISHES